‘ಕಬ್ಜ’ ಸಿನಿಮಾ ಸಕ್ಸಸ್​ ಸೆಲೆಬ್ರೇಷನ್ ಹೇಗಿತ್ತು ನೋಡಿ; ಇಲ್ಲಿದೆ ವಿಡಿಯೋ

‘ಕಬ್ಜ’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಚಿತ್ರ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ. ಈ ಚಿತ್ರದಿಂದ ನಿರ್ಮಾಪಕ, ನಿರ್ದೇಶಕ ಆರ್​. ಚಂದ್ರು  ದೊಡ್ಡ ಯಶಸ್ಸು ಕಂಡಿದ್ದಾರೆ. ಚಿತ್ರತಂಡ ಭಾನುವಾರ (ಮಾರ್ಚ್ 19) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ಇಡೀ ತಂಡ ಕೇಕ್ ಕತ್ತರಿಸಿ ಯಶಸ್ಸನ್ನು ಸಂಭ್ರಮಿಸಿದೆ. ಈ ಸಿನಿಮಾ ಭಾನುವಾರ ಎಷ್ಟು ಕಲೆಕ್ಷನ್ ಮಾಡಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿದೆ.