ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕಾಗಿ ಬಿಡುವಿಲ್ಲದ ಪ್ರಚಾರದಲ್ಲಿ ವಿನೋದ್ ಬ್ಯುಸಿಯಾಗಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಅವರ ಆಪ್ತ ಗೆಳೆಯ ನಟ ದರ್ಶನ್, 'ಪೈಟರ್'ಗೆ ಬೆಂಬಲಿಸಿದ್ದು, 'ಹೇಗೆ ಟೈಗರ್ ಪ್ರಭಾಕರ್ ಅವರನ್ನು ಫೈಟರ್ ಇಂದ ಒಬ್ಬ ಸ್ಟಾರ್ ನಟನನ್ನಾಗಿ ಮಾಡಿದಿರೋ ಹಾಗೆಯೇ ನಮ್ಮ ಮರಿ ಟೈಗರ್ಗೂ ಬೆಂಬಲಿಸಿ. ಇದೇ ಅಕ್ಟೋಬರ್ 6ರಂದು ತೆರೆಗೆ ಬರುತ್ತಿರುವ 'ಫೈಟರ್' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ಸಿನಿಮಾವನ್ನು ಹರಸಿ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದಿದ್ದಾರೆ.