ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಘಟನೆ ಮೆಲುಕು ಹಾಕಿದ ಸಂಜನಾ

‘ದರ್ಶನ್​ ರೀತಿ ನನ್ನದು ಕೂಡ ಪೂರ್ತಿಯಾಗಿ ಸಹವಾಸದ ದೋಷ. ಅವರು ಎಲ್ಲೋ ಇದ್ದಾರೆ, ಮರ್ಡರ್​ ಎಲ್ಲೋ ಆಗಿದೆ. ಅವರು ಒಳಗೆ ಹೋಗಿದ್ದಾರೆ. ನಾನು ರಾಕಿ ಬ್ರದರ್​ ಎಂದು ನಂಬಿದ್ದ ವ್ಯಕ್ತಿ ಅರೆಸ್ಟ್​ ಆಗಿದ್ದ. ಆಗ ನನ್ನ ಹೆಸರು ಅದರಲ್ಲಿ ಸೇರಿಸಿದರು. ತನಿಖೆಗೆ ಅಂತ ಕರೆದುಕೊಂಡು ಹೋದರು. ನಮ್ಮ ಮನೆಯಲ್ಲಿ ಒಂದು ಸಿಗರೇಟ್​, ಬಿಯರ್ ಬಾಟಲ್​ ಕೂಡ ಸಿಕ್ಕಿರಲಿಲ್ಲ’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.