ಕಬ್ಬಿಣದ ಬೀಮ್ ಅಲ್ಲದೆ ಜಿಂದಾಲ್ ಸಂಸ್ಥೆಯವರು ತಯಾರಿಸಿರುವ ಗೇಟ್ ನ ಆಕಾರ, ಗಾತ್ರ ಮತ್ತು ವಿನ್ಯಾಸ ಸಹ ಅಳವಡಿಕೆಗೆ ಸಮಸ್ಯೆಯಾಗಿವೆ. ಪ್ರಾಯಶಃ ಅವರು ಗೇಟನ್ನು ಮರುವಿನ್ಯಾಸಗೊಳಿಸಿರಬಹುದು. ಸಂಸ್ಥೆಯ ಇಂಜಿನೀಯರ್ಗಳು ಯಾವ ಕೆಲಸವನ್ನೂ ಧಾವಂತದಲ್ಲಿ ಮಾಡುತ್ತಿಲ್ಲ, ಅವಸರಿಸಿದರೆ ಜಲಾಶಯಕ್ಕೆ ಧಕ್ಕೆಯಾಗುವ ಅಪಾಯವಿದೆ ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ.