ಚಾಮರಾಜನಗರ, ಆಗಸ್ಟ್ 04: ಪುಣಜನೂರು ಸಮೀಪದ ತಮಿಳುನಾಡಿನ ಅಸನೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿ ವಾಹನ ಅಡ್ಡಗಟ್ಟುತ್ತಿದ್ದ ಕಾಡಾನೆ (Elephant) ಇದೀಗ ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ನಡೆದಿದೆ. ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆಯೊಂದು ಬಾಳೆಗೊನೆ ಎತ್ತಿಕೊಂಡು ತಿಂದಿದೆ.