ವಿಧಾನಸಭೆಯ ಬಾಗಿಲಲ್ಲೇ ಪಾನ್ ಮಸಾಲ ಉಗುಳಿದ ಶಾಸಕ

ಉತ್ತರ ಪ್ರದೇಶದ ವಿಧಾನಸಭೆಯಲ್ಲಿ 'ಪಾನ್ ಮಸಾಲ' ಉಗುಳಿದ್ದಕ್ಕಾಗಿ ಉತ್ತರ ಪ್ರದೇಶದ ಸ್ಪೀಕರ್ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಆ ಶಾಸಕರ ಹೆಸರನ್ನು ಹೇಳದೆ ಸ್ಪೀಕರ್ ತರಾಟೆ ತೆಗೆದುಕೊಂಡಿದ್ದಾರೆ. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ, ನಮ್ಮ ವಿಧಾನಸಭಾ ಸಭಾಂಗಣದಲ್ಲಿ, ಕೆಲವು ಸದಸ್ಯರು ಪಾನ್ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತು. ಹಾಗಾಗಿ, ನಾನು ಇಲ್ಲಿಗೆ ಬಂದು ಸ್ವಚ್ಛಗೊಳಿಸಿದೆ ಎಂದು ಸ್ಪೀಕರ್ ಹೇಳಿದ್ದಾರೆ.