ರಾಹುಲ್, ಖರ್ಗೆ, ಸಿದ್ದರಾಮಯ್ಯ ಫಟಾಫಟ್ ಪ್ರಶ್ನೋತ್ತರ

ಪ್ರಚಾರ ಮುಕ್ತಾಯವಾಗುವುದೇ ಪ್ರಚಾರ ಕಾರ್ಯದ ಅತ್ಯುತ್ತಮ ಭಾಗ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕ್ಯಾಂಪೇನಿಂಗ್​ನಲ್ಲಿ ಅವರಿಗೆ ಬಹಳ ಖುಷಿ ಕೊಡುವ ಸಂಗತಿ ಎಂದರೆ ಭಾಷಣವಂತೆ. ಭಾರತ್ ಜೋಡೋ ಯಾತ್ರೆ, ಚುನಾವಣಾ ಪ್ರಚಾರ ಇತ್ಯಾದಿ ಕ್ಯಾಂಪೇನಿಂಗ್​​ನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ರಾಹುಲ್ ಗಾಂಧಿಗೆ ಇದು ಯಾಕೆ ಮುಖ್ಯ ಎಂದರೆ ದೇಶಕ್ಕೆ ಏನು ಅಗತ್ಯ ಎನ್ನುವುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆಯಂತೆ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಜೊತೆಗೂ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.