‘ಡೋಂಟ್ ಟೀಚ್ ಫಾದರ್, ಹೌ ಟು ಫ..’ ಎಂಬ ಡೈಲಾಗ್ನೊಂದಿಗೆ ‘ಮಾರ್ಟಿನ್’ ಟ್ರೇಲರ್ ಕೊನೆಯಾಗುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಧ್ರುವ ಸರ್ಜಾ ಅವರಿಗೆ ಪ್ರಶ್ನೆ ಎದುರಾಯಿತು. ‘ಡೋಂಟ್ ಟೀಚ್ ಫಾದರ್ ಹೌ ಟು ಫೈಟ್ ಎಂಬುದು ಆ ಡೈಲಾಗ್ನ ಪೂರ್ಣ ರೂಪ. ಸೋಶಿಯಲ್ ಮೀಡಿಯಾದಲ್ಲಿ ಏನಿದೆ ಎಂಬುದನ್ನು ಬಿಟ್ಟುಬಿಡಿ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಈ ಸಿನಿಮಾಗೆ ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ.