ಮೈಸೂರು: ಕಬಿನಿಯಲ್ಲಿ ಸಫಾರಿ ವೇಳೆ ಆರು ಹುಲಿಗಳು ಪ್ರತ್ಯಕ್ಷ! ವಿಡಿಯೋ ವೈರಲ್

ಮೈಸೂರು, ಆಗಸ್ಟ್ 10: ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅರಣ್ಯದ ಕಬಿನಿಯಲ್ಲಿ ಸಫಾರಿಗೆ ಮಾಡುತ್ತಿದ್ದ ಪ್ರವಾಸಿಗರಿಗೆ ಆರು ಹುಲಿಗಳು ಕಾಣಿಸಿಕೊಂಡಿವೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಫಾರಿಗೆ ತೆರಳಿದ್ದ ಪ್ರಸನ್ನ ಎಂಬುವವರ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಇದಾಗಿದೆ.