ಯಾಕೆ ಪ್ರಹ್ಲಾದ್​ ಜೋಶಿ CM ಆಗಬಾರ್ದ? ಎಂದ ಶಾಸಕ

ಕುಮಾರಸ್ವಾಮಿ ಎರಡು ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದವರು ಅಂತಾ ದೆಹಲಿಯಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಹೆಚ್​ಡಿಕೆ ಸಿಎಂ ಆಗಿ ಅಧಿಕಾರವನ್ನು ಅನುಭವಿಸಿದ್ದಾರೆ. ಈಗ ಜೆಡಿಎಸ್​ ಕಥೆ ಮುಗಿಯುತ್ತಿದ್ದು ಹತಾಶರಾಗಿದ್ದಾರೆ. ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷ ಎರಡು ಭಾಗ ಆಗಲಿದೆ ಅಂತಾ ಶಾಸಕ ಎಂ.ಪಿ ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.