ಪ್ರಧಾನಿ ಮೋದಿ ಪ್ರಸ್ತುತ ಅಯೋಧ್ಯೆಯಲ್ಲಿದ್ದು, ಅಲ್ಲಿ ಇಂದು ವಾಲ್ಮೀಕಿ ವಿಮಾನ ನಿಲ್ದಾಣ ಹಾಗೂ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ನಡುವೆ ಪ್ರಧಾನಿ ಮೋದಿಯವರು ಪಿ.ಎಂ ಆವಾಸ್ ಯೋಜನೆ ಮತ್ತು ಉಜ್ವಲ ಯೋಜನೆಯ ಫಲಾನುಭವಿ ಮೀರಾ ಮಾಂಝಿ ಎಂಬವರ ಮನೆಗೆ ಆಚ್ಚರಿಯ ಭೇಟಿಯನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.