ಅಭ್ಯಾಸ ನಿಲ್ಲಿಸಿ ಅಭಿಮಾನಿಗಳ ಬೇಡಿಕೆ ಈಡೇರಿಸಿದ ಕೊಹ್ಲಿ

ಐಪಿಎಲ್ 2025 ರ 8ನೇ ಪಂದ್ಯವು ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಎರಡೂ ತಂಡಗಳ ನಡುವೆ ಒಂದು ಪಂದ್ಯ ಮಾತ್ರ ನಡೆದಿತ್ತು. ಇದರಲ್ಲಿ ಆರ್‌ಸಿಬಿ, ಸಿಎಸ್‌ಕೆ ತಂಡವನ್ನು 27 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಹೀಗಾಗಿ ಈ ಗೆಲುವಿನ ಸರಣಿಯನ್ನು ಮುಂದುವರೆಸುವುದರ ಜೊತೆಗೂ ಚೆಪಾಕ್​​ನಲ್ಲಿ ಕಳೆದ 17 ವರ್ಷಗಳ ಬರವನ್ನು ನೀಗಿಸಿಕೊಳ್ಳಲು ಆರ್​ಸಿಬಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ತಂಡದ ಆಟಗಾರರೆಲ್ಲರು ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಬ್ಯಾಟಿಂಗ್​ನಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಕೊಹ್ಲಿಯ ಅಭ್ಯಾಸ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿ ಸಂತೋಷಪಡಿಸುವ ಕೆಲಸವನ್ನು ಕೊಹ್ಲಿ ಮಾಡಿದ್ದಾರೆ.