ಇತ್ತೀಚಿಗೆ ಇಬ್ಬರು ಅಮಾಯಕರನ್ನ ಕಾಡಾನೆಯೊಂದು ಬಲಿ ಪಡೆದಿತ್ತು. ಹಾಗಾಗಿ ಈ ಕಾಡಾನೆಯನ್ನು ಹಿಡಿಯಲೇಬೇಕು ಎಂದು ನಿರ್ಧರಿಸಿ, ಸಾಕಾನೆಗಳ ನೆರವಿನಿಂದ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ. ಸೆರೆ ಹಿಡಿದ 40 ವರ್ಷದ ಗಂಡಾನೆಯನ್ನ ಲಾರಿಗೆ ಹತ್ತಿಸುವ ವೇಳೆ ಅದರ ದಂತ ಮುರಿದಿದೆ. ಕೋಪದಲ್ಲಿ ಕ್ರೇನ್ಗೆ ಕಾಡಾನೆ ಗುದ್ದಿದೆ.