‘ಹಾಯ್​ ನಾನ್ನ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಟಾಲಿವುಡ್​ ನಟ ನಾನಿ

ಟಾಲಿವುಡ್​ನ ಖ್ಯಾತ ನಟ ನಾನಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ನಟಿಸಿರುವ ‘ಹಾಯ್​ ನಾನ್ನ’ ಸಿನಿಮಾ ಡಿಸೆಂಬರ್​ 7ರಂದು ಬಿಡುಗಡೆ ಆಗಲಿದೆ. ಇದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದೆ. ಕನ್ನಡಕ್ಕೂ ಡಬ್​ ಆಗಿ ‘ಹಾಯ್​ ನಾನ್ನ’ ಸಿನಿಮಾ ರಿಲೀಸ್​ ಆಗಲಿದೆ. ಬೆಂಗಳೂರಿನಲ್ಲಿ ಡಿಸೆಂಬರ್​ 4ರಂದು ಈ ಚಿತ್ರದ ಸುದ್ದಿಗೋಷ್ಠಿ ನಡೆಯಲಿದೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಮೃಣಾಲ್​ ಠಾಕೂರ್​ ಅವರು ಅಭಿನಯಿಸಿದ್ದಾರೆ. ಈ ವರ್ಷ ಬಿಡುಗಡೆ ಆಗಿದ್ದ ‘ದಸರಾ’ ಸಿನಿಮಾದಲ್ಲೂ ನಾನಿ ಅಬ್ಬರಿಸಿದ್ದರು. ‘ಹಾಯ್​ ನಾನ್ನ’ ಮೂಲಕ ಈಗ ಇನ್ನೊಂದು ಕಥೆಯನ್ನು ಅವರು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.