ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ ಕಾಂಗ್ರೆಸ್‌ನಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಅಧಿಕಾರ ಹಂಚಿಕೆ, ಕುರ್ಚಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮುನಿಯಪ್ಪ ಹೇಳಿದಂತೆ ನಡೆದ್ರೆ ಎರಡೂವರೆ ವರ್ಷದ ಬಳಿಕ ಸಚಿವರು ಮಾತ್ರ ಬದಲಾಗ್ತಾರಾ? ಅಥವಾ ಸಚಿವರ ಜೊತೆಗೆ ಸಿಎಂ, ಡಿಸಿಎಂ ಸ್ಥಾನಗಳೂ ಕೂಡ ಬದಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಚಿವ ಮುನಿಯಪ್ಪ, ಸಿಎಂ, ಡಿಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದುಬಿಟ್ಟಿದ್ದಾರೆ.