ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಬಗ್ಗೆ ಮಾತಾಡಿದ ಕುಮಾರಸ್ವಾಮಿ, ಅವರು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಥವಾ ಎನ್ ಡಿ ಎ ಒಕ್ಕೂಟದ ಒಮ್ಮತದ ಅಭ್ಯರ್ಥಿಯಾಗಿದ್ದಾರೆ, ಜೆಡಿಎಸ್ ಶಾಸಕರೆಲ್ಲ ಈಗಾಗಲೇ ಅವರಿಗೆ ಆತ್ಮಸಾಕ್ಷಿ ವೋಟು ನೀಡಿಬಿಟ್ಟಿದ್ದಾರೆ ಮತ್ತು ಮತದಾನ ನಡೆಯುವ ಸಂದರ್ಭದಲ್ಲೂ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸುವಂತೆ ತಮ್ಮ ಎಲ್ಲ ಶಾಸಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.