ಕಾರಿನಲ್ಲಿದ್ದ ಹಣದ ಚೀಲಗಳು

ಸ್ಪ್ಯಾನರ್ ಒಂದರಿಂದ ವಿಂಡೋ ಪೇನ್ ಒಡೆದ ಬಳಿಕ ಕಾರನೊಳಗೆ ನೋಟುಗಳಿದ್ದ ಚೀಲಗಳು ಸಿಕ್ಕಿವೆ. ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ಒಯ್ಯಲಾಗುತಿತ್ತು ಅನ್ನೋದು ಗೊತ್ತಾಗಿಲ್ಲ. ಅದು ಗೊತ್ತಾಗೋದೂ ಇಲ್ಲ ಅನ್ನೋದು ಬೇರೆ ವಿಚಾರ! ಪ್ರತಿ ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಬರಾಮತ್ತು ಮಾಡಿಕೊಳ್ಳುತ್ತಾರೆ, ಕೆಲವು ಸಲ ಹಣ ಸಾಗಿಸುತ್ತಿದ್ದ ಜನ ಕೂಡ ಪೊಲೀಸರ ವಶಕ್ಕೆ ಸಿಗುತ್ತಾರೆ, ಅದರೆ ಹಣದ ವಾರಸುದಾರ ಯಾರು ಅನ್ನೋದು ಗೊತ್ತಾಗಲ್ಲ.