ಬಸನಗೌಡ ಪಾಟೀಲ್ ಯತ್ನಾಳ್

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸದಿದ್ದರೂ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನ ಪರವಾಗಿ ಪ್ರಚಾರ ಮಾಡಿದೆ, ಬೊಮ್ಮಾಯಿ ಸೋತಿದ್ದು ದುರದೃಷ್ಟಕರ, ಯಾಕೆಂದರೆ ಅವರು ಕ್ಷೇತ್ರಕ್ಕಾಗಿ ಬಹಳ ಕೆಲಸ ಮಾಡಿದ್ದಾರೆ, ಕಾಂಗ್ರೆಸ್ ₹ 100 ಕೋಟಿ ಖರ್ಚು ಮಾಡಿ ಚುನಾವಣೆ ಗೆದ್ದಿದೆ, ಆದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ಗೆ ಮಹಾರಾಷ್ಟ್ರದಲ್ಲಿ ಆದಂಥ ಸ್ಥಿತಿ ಎದುರಾಗಲಿದೆ ಎಂದು ಯತ್ನಾಳ್ ಹೇಳಿದರು.