ಭಕ್ತರೊಬ್ಬರು ಮಾತಾಡುವಾಗ ಸ್ವಾಮೀಜಿ ನೂರ್ಕಾಲ ಬಾಳಲಿ ಅಂತ ಹಾರೈಸಿದರು ಅಂತ ಹೇಳಿದ ಸ್ವಾಮೀಜಿ, ತಮಗೆ ಅಷ್ಟೆಲ್ಲ ವರ್ಷ ಬದುಕುವ ಆಸೆಯಿಲ್ಲ, ಮಠದ ಸಾರಥ್ಯ ವಹಿಸಿಕೊಂಡ 15 ವರ್ಷಗಳಿಗೆ ಸಾಕಾಗಿ ಹೋಗಿದೆ, ಹೊರಗಡೆ ಕಾಣಿಸಿದರೆ ಕೊಚ್ಚಿಹಾಕ್ತೀವಿ ಅಂತ ಹೇಳುವವರಿದ್ದಾರೆ. ಹಾಗಾಗಿ ಭಗವಂತನ ಸೇವೆ ಮಾಡುತ್ತಾ ಅದಷ್ಟು ಬೇಗ ಆತನ ಪಾದ ಸೇರುವುದೇ ವಾಸಿ ಅಂತ ಹೇಳುತ್ತಾರೆ.