ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಜೈಲಿನಲ್ಲಿ ಇರುವ ಎಲ್ಲರಿಗೂ ರಾಖಿ ಕಟ್ಟಲು ಕೆಲವು ಮಹಿಳೆಯರು ಇಂದು (ಆ.19) ಪರಪ್ಪನ ಅಗ್ರಹಾರಕ್ಕೆ ತೆರಳಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರು ರಾಖಿ ಕಟ್ಟಿಸಿಕೊಂಡಿಲ್ಲ. ಆದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಹಳ ವಿನಯದಿಂದ ರಾಖಿ ಕಟ್ಟಿಸಿಕೊಂಡರು ಎಂದು ಯುವತಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಪವಿತ್ರಾ ಗೌಡ ಅವರು ಕೊಠಡಿಯಿಂದ ಹೊರಗೆ ಬರಲಿಲ್ಲ. ನಾವು ಕೂಡ ಒತ್ತಾಯ ಮಾಡಲಿಲ್ಲ. ವಿಜಯಲಕ್ಷ್ಮಿ ಅವರು ತುಂಬ ಚೆನ್ನಾಗಿ ಪ್ರತಿಕ್ರಿಯಿಸಿದರು’ ಎಂದು ಯುವತಿ ಹೇಳಿದ್ದಾರೆ.