ಹೊಸ ವರ್ಷದ ಆರಂಭದಲ್ಲೇ ನಟ ಗಣೇಶ್ ಅವರು ಹೊಸ ಸಿನಿಮಾ ‘ಪಿನಾಕ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ನಿರ್ಮಾಣ ಆಗಲಿರುವ ಈ ಚಿತ್ರಕ್ಕೆ ಕೊರಿಯೋಗ್ರಾಫರ್ ಧನಂಜಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆ ವೇಳೆ ಗಣೇಶ್ ಅವರು ಚಿತ್ರತಂಡದ ಪರಿಚಯ ಮಾಡಿಕೊಟ್ಟರು.