ಬೆಂಗಳೂರು ಕಂಬಳದಲ್ಲಿ ಅಂಕದ ಕೋಳಿಗಳಿಗೆ ಡಿಮಾಂಡ್, ಲಕ್ಕಿ ಡ್ರಾ ಮೂಲಕ ಮಾರಾಟ

ಬೆಂಗಳೂರು, ನ.25: ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ (Bengaluru Kambala) ನಡೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕೋಣಗಳ ಓಟಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಒಂದೆಡೆ, ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದರೆ, ಇನ್ನೊಂದೆಡೆ ಅಂಕದ ಕೋಳಿಗಳ ಖರೀದಿಗೂ ಜನರು ಮುಗಿಬೀಳುತ್ತಿದ್ದಾರೆ. ಹೌದು, ಲಕ್ಕಿ ಡ್ರಾದ ಮೂಲಕ ಕೋಳಿ ಖರೀದಿಸಲಾಗುತ್ತಿದೆ.