ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ರಥೋತ್ಸವಕ್ಕೆ ಇಂದು ದೇವಸ್ಥಾನ ಆಡಳಿತ ಮಂಡಳಿ ಚಾಲನೆ ನೀಡಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19 ರಿಂದ ಬರೊಬ್ಬರಿ 9 ದಿನಗಳ ಕಾಲ ಜರುಗಲಿದೆ. ನಿನ್ನೆ ದೇವಿಯ ಕಂಕಣ ಶಾಸ್ತ್ರ ಮಾಡಲಾಗಿದೆ.