ಅಮೆರಿಕದ ವೈಟ್​ಹೌಸ್​ನಲ್ಲೂ ದೀಪಾವಳಿ ಸಂಭ್ರಮ; ಹಿಂದಿ ಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್

ಅಮೆರಿಕದ ವೈಟ್ ಹೌಸ್​ನಲ್ಲಿ ದೀಪಾವಳಿ ಸಮಾರಂಭ ಜೋರಾಗಿದೆ. ಹಿಂದಿ ಭಕ್ತಿಗೀತೆಯಾದ 'ಓಂ ಜೈ ಜಗದೀಶ್ ಹರೇ' ಹಾಡನ್ನು ಅಮೆರಿಕದ ಮಿಲಿಟರಿ ಬ್ಯಾಂಡ್ ನುಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವೈರಲ್ ಆಗಿದೆ. ಗೀತಾ ಗೋಪಿನಾಥ್ ಅಮೆರಿಕದ ಮಿಲಿಟರಿ ಬ್ಯಾಂಡ್‌ನ ಮೋಡಿ ಮಾಡುವ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.