ವರದಿಗಾರ ಕೆಲ ಮಕ್ಕಳೊಂದಿಗೆ ಮಾತಾಡಿದ್ದು ಎಲ್ಲರೂ ಶಾಲೆ ಪುನರಾರಂಭಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶೆಲ್ಲಿಂಗ್ ಮತ್ತು ಫೈರಿಂಗ್ ನಡೆಯುತ್ತಿದ್ದಾಗ ಭಯವಾಗುತಿತ್ತು, ಈಗ ಯಾವ ಭಯವೂ ಇಲ್ಲ, ತಂದೆ ತಾಯಿಗಳಿಗೆ ಕೊಂಚ ಆತಂಕವಿದೆ., ಆದರೆ, ಸೇನೆ ಮತ್ತು ಸರ್ಕಾರದ ಮೇಲೆ ಭರವಸೆ ಇರೋದ್ರಿಂದ ನಿರುಮ್ಮಳವಾಗಿದ್ದಾರೆ ಎಂದು ಶಾಲೆಗಳಿಗೆ ಬಂದಿರುವ ಮಕ್ಕಳು ಹೇಳುತ್ತವೆ.