Brahmanda Guruji Promo

ನರೇಂದ್ರ ಬಾಬು ಶರ್ಮಾ ಅಲಿಯಾಸ್​ ಬ್ರಹ್ಮಾಂಡ ಗುರೂಜಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 10’ ಶೋಗೆ ಕಾಲಿಟ್ಟಿದ್ದಾರೆ. ಅತಿಥಿಯಾಗಿ ಬಂದಿರುವ ಅವರಿಗೂ ಬಿಗ್​ ಬಾಸ್​ನಲ್ಲಿ ಟಾಸ್ಕ್​ ನೀಡಲಾಗಿದೆ. ದೊಡ್ಮನೆಯೊಳಗಿನ ಸದಸ್ಯರಿಗೆ ಆಗಾಗ ಬಿಗ್​ ಬಾಸ್​ ಕಡೆಯಿಂದ ಆದೇಶ ಬರುತ್ತದೆ. ಎಲ್ಲರೂ ಬಿಗ್​ ಬಾಸ್​ಗೆ ಬಹಳ ಗೌರವ ನೀಡುತ್ತಾರೆ. ‘ಕೇಳಿ, ನೋಡಿ, ಕಳಿಸಿ’ ಎಂದೆಲ್ಲ ಬಹುವಚನದಲ್ಲಿ ಗೌರವದಿಂದ ಸ್ಪರ್ಧಿಗಳು ಮಾತನಾಡುತ್ತಾರೆ. ಆದರೆ ಬ್ರಹ್ಮಾಂಡ ಗುರೂಜಿ ಅವರ ವರಸೆಯೇ ಬೇರೆ. ಸೋಮವಾರದ (ನ.20) ಎಪಿಸೋಡ್​ನಲ್ಲಿ ಅವರಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಆ ವೇಳೆ ಅವರು ಕ್ಯಾಮೆರಾ ಇರುವಲ್ಲಿಗೆ ಬಂದು ಬಿಗ್​ ಬಾಸ್​ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ‘ನೋಡಪ್ಪ ಬಿಗ್​ ಬಾಸು.. ಕೇಳಯ್ಯ ಇಲ್ಲಿ.. ನನಗೆ ಓಡಾಡೋಕೆ ಆಗಲ್ಲ. ಈಗಲೇ ಹೇಳಿದೀನಿ. ಎಲ್ಲರನ್ನೂ ಒಂದು ಕಡೆ ಕೂರಿಸು’ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಶೋ ಬಿತ್ತರ ಆಗುತ್ತದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್​ ನೋಡಬಹುದು.