ಕಾಂಗ್ರೆಸ್ ಹಲವು ತಲೆಮಾರುಗಳನ್ನು ನಾಶಪಡಿಸಿದೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿ

ಕಾಂಗ್ರೆಸ್ ವ್ಯವಸ್ಥೆಯು ಎಸ್ಸಿ, ಎಸ್ಟಿ, ಒಬಿಸಿಯ ಹಲವು ತಲೆಮಾರುಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದಾರೆ. ಆ ಮೂಲಕ ಕೆಳಜಾತಿಗಳ ವಿರುದ್ಧ ವ್ಯವಸ್ಥೆಯು ಒಗ್ಗೂಡಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.