ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಟಿ

ಹಾಗೆಯೇ, ಗೃಹಲಕ್ಷ್ಮಿ ಯೋಜನೆಯಲ್ಲಿ 1.20 ಕೋಟಿ ಮಹಿಳೆಯರು ಪ್ರರಿ ತಿಂಗಳು ₹ 2,000 ಪಡೆಯುತ್ತಿದ್ದಾರೆ ಮತ್ತು ಇದುವರೆಗೆ ₹ 20, 293.49 ಕೋಟಿ ವಿತರಿಸಲಾಗಿದೆ. ತಡವಾಗಿ ಆರಂಭಗೊಂಡಿರುವ ಯುವ ನಿಧಿ ಯೋಜನೆಗೆ ಇದುವರೆಗೆ 1,53,255 ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದು ಈವರೆಗೆ ₹ 29. 25 ಲಕ್ಷ ಖರ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದರು.