ಔರಂಗಜೇಬನ ಸಮಾಧಿ ವಿವಾದ, ಸುತ್ತಲೂ ತಾತ್ಕಾಲಿಕ ಗೋಡೆ ನಿರ್ಮಾಣ

ನಾಗ್ಪುರ ಹಿಂಸಾಚಾರದ ನಂತರ ಖುಲ್ತಾಬಾದ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಧಿಕಾರಿಗಳು ಔರಂಗಜೇಬನ ಸಮಾಧಿಯ ಸುತ್ತಲೂ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಿದ್ದಾರೆ. ಖುಲ್ತಾಬಾದ್‌ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸಮಾಧಿಗೆ ಭೇಟಿ ನೀಡುವವರು ಆಧಾರ್ ಕಾರ್ಡ್ ತೋರಿಸಬೇಕು ಮತ್ತು ತಮ್ಮ ಮೊಬೈಲ್ ಫೋನ್‌ಗಳನ್ನು ಹೊರಗೆ ಇಡಬೇಕು.