ವಿಜಯ್ ರಾಘವೇಂದ್ರರ ಪತ್ನಿ ಸ್ಪಂದನಾ ನಿಧನ ಹೊಂದಿ 11 ದಿನಗಳಾಗಿದ್ದು, ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಹಾಗೂ ಸ್ಪಂದನಾರ ತವರು ಮನೆಯಲ್ಲಿ ಇಂದು 11 ದಿನದ ಕಾರ್ಯಗಳು ಸಂಪನ್ನಗೊಂಡಿವೆ. 11 ದಿನದ ಕಾರ್ಯದಂದು ಬಂಧು, ಬಾಂಧವರಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ಹಲವು ವಿಧಿ-ವಿಧಾನಗಳನ್ನು ನೆರವೇರಿಸಲಾಗಿದೆ. ಈ ದುಃಖದ ಸಮಯದಲ್ಲಿ ಸ್ಪಂದನಾರ ಸೋದರ ಮಾವ ಸ್ಪಂದನಾರ ಬಗ್ಗೆ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.