ಪ್ರಜ್ವಲ್ ಪ್ರಕರಣ: ಎಚ್​ಡಿಕೆ, ಡಿಕೆಶಿ, ಸಿದ್ದು, ಜೋಷಿ ವಾಗ್ಸಮರ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಲು ಸಿದ್ದರಾಮಯ್ಯ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನೇರವಾಗಿ ಆರೋಪ ಮಾಡಿದ್ದಾರೆ. ಕೇಂದ್ರಕ್ಕೆ ಗೊತ್ತಿಲ್ಲದೇ ಒಬ್ಬ ವ್ಯಕ್ತಿ ವಿದೇಶಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ. ಇನ್ನು, ರೇವಣ್ಣ ಕಾರ್ ಡ್ರೈವರ್ ಕಾರ್ತಿಕ್​ನನ್ನು ಮಲೇಷ್ಯಾಗೆ ಕಳುಹಿಸಿ ಅಲ್ಲಿಂದ ಬಿಡುಗಡೆ ಮಾಡಿಸಿದ್ದು ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.