ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!

ಕೇಂದ್ರ ಸರ್ಕಾರವೇ ಮುಸಲ್ಮಾನರಿಗೆ ವಸತಿ ಯೋಜನೆಯಲ್ಲಿ ಶೇಕಡ 15 ರಷ್ಟು ಮೀಸಲಾತಿ ಕಲ್ಪಿಸಿದೆಯಲ್ಲ ಅಂತ ಪತ್ರಕರ್ತರು ಹೇಳಿದಾಗ ಈಶ್ವರಪ್ಪ ಪದಗಳಿಗಾಗಿಗಿ ತಡವರಿಸಲಾರಂಭಿಸಿದರು. ಡಾ ಬಿ ಅರ್ ಅಂಬೇಡ್ಕರ್ ಅವರು ಧರ್ಮಾಧರಿತ ಮೀಸಲಾತಿ ಸಲ್ಲದು ಅಂತ ಹೇಳಿದ್ದಾರೆ ಅಂತ ಹೇಳುವ ಈಶ್ವರಪ್ಪ, ಅಲ್ಪಸಂಖ್ಯಾತರು ಅನ್ನೋದು ಒಂದು ಧರ್ಮ, ಅದರಲ್ಲಿ ಕ್ರಿಶ್ಚಿಯನ್ನರು ಮುಸಲ್ಮಾನರು ಇದ್ದಾರೆ ಅನ್ನುತ್ತಾರೆ.