ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯ ಸದಸ್ಯರ ನಡುವೆ ಸಾಮರಸ್ಯ ಕಡಿಮೆ ಆಗುತ್ತಿದೆ. ಪೈಪೋಟಿ ಹೆಚ್ಚಾದಂತೆಲ್ಲ ಮಾತಿಗೆ ಮಾತು ಬೆಳೆಯುತ್ತಿದೆ. ನಟಿಯರಾದ ಐಶ್ವರ್ಯಾ ಸಿಂಧೋಗಿ ಮತ್ತು ಅನುಷಾ ರೈ ಅವರ ನಡುವೆ ಜೋರು ಜಗಳ ನಡೆದಿದೆ. ಇಬ್ಬರೂ ಪರಸ್ಪರ ಬೈಯ್ದುಕೊಂಡಿದ್ದಾರೆ. ತ್ರಿಕೋನ ಪ್ರೇಮಕಥೆಯ ಕಾರಣಕ್ಕೆ ಸುದ್ದಿಯಾಗಿದ್ದ ಈ ಸುಂದರಿಯರ ನಡುವೆ ಈಗ ಜಗಳ ಆಗಿದೆ.