ಉಡುಪಿ ನಗರದ ನೆಲ್ಲಿಕಟ್ಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಕೊರಗಜ್ಜ, ಬಬ್ಬು ಸ್ವಾಮಿ ಮತ್ತು ತನ್ನಿಮಾನಿಗ ದೈವಗಳ ವೇಷಗಳನ್ನು ಧರಿಸಿರುವುದು ದೈವಾರಾಧನೆಗೆ ಅಪಮಾನ ಎಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ತುಳುನಾಡಿನಲ್ಲಿ ದೈವಾರಾಧನೆಯನ್ನು ಅಪಮಾನಿಸುವ ಘಟನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಉಡುಪಿಯಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ.