school in Sangameshwarpet in Sringeri need renovation before complete collapse

ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಒಂದೊಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ, ಕೆಲ ಶಾಲೆಗಳು ಬಾಗಿಲು ಹಾಕುವ ಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯ ನಡುವೆ ಇಲ್ಲೊಂದು ಶಾಲೆಯಲ್ಲಿ 140 ವಿದ್ಯಾರ್ಥಿಗಳು ಕಲಿಯುತ್ತಿದ್ದು ಶಿಕ್ಷಕರ ಕೊರತೆಯೂ ಈ ಶಾಲೆಗಿಲ್ಲ, ಆದ್ರೆ ಶಿಕ್ಷಕರ ಜೊತೆ 140 ವಿದ್ಯಾರ್ಥಿಗಳು (Students) ಜೀವ ಭಯದಲ್ಲಿರುವ ಸ್ಥಿತಿ ಈ ಶಾಲೆಯದ್ದು. ಏನಾಗಿದೆ ಈ ಶಾಲೆಗೆ ಅಂತೀರಾ? ಈ ಸ್ಟೋರಿ ನೋಡಿ. ಈ ಶಾಲೆಯನ್ನ ಹೊರಗಿನಿಂದ ನೋಡಿದಾಗ ಅಂದವಾಗಿ ಸುಣ್ಣಬಣ್ಣ ಬಳೆದು ಚಂದವಾಗಿಯೇನೂ ಕಾಣುತ್ತದೆ. ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (Government school) ಇರೋದು ಚಿಕ್ಕಮಗಳೂರು ತಾಲೂಕಿನ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಂಗಮೇಶ್ವರ ಪೇಟೆಯಲ್ಲಿ (Sangameshwarpet). ಹೊರಗಿನಿಂದ ನೋಡಿದಾಗ ಆಹಾ ಎಷ್ಟೊಂದು ಸುಂದರವಾಗಿದೆ ಅನ್ನಿಸುತ್ತೆ. ಆದ್ರೆ ಒಳ ಹೋಗಿ ನೋಡಿದ್ರೆ ಗಾಬರಿ ಆಗೋದು ಖಂಡಿತ. ಹೌದು ಮೂರು ವರ್ಷ ಗಳಿಂದ ನಿರಂತರವಾಗಿ ಈ ಶಾಲೆ ಕುಸಿದು ಬಿಳುತ್ತಿದ್ದು, ಈ ಮಳೆಗಾಲದ ಮಳೆಗೆ ಸಂಪೂರ್ಣ ಶಾಲೆಯ ಮೂರು ರೂಮಿನ ಗೋಡೆ , ಮೇಲ್ಛಾವಣಿ ಬಿದ್ದು ಹೋಗಿದೆ. ಸತತವಾಗಿ ಮೂರು ವರ್ಷದಿಂದ ಶಾಲೆ ಶಿಥಿಲವಾಗುತ್ತಿದ್ದು, ಹೊಸ ಕಟ್ಟಡಕ್ಕಾಗಿ ಪೋಷಕರು ವಿದ್ಯಾರ್ಥಿಗಳು ಶಿಕ್ಷಕರು ಮನವಿ ಮಾಡಿದ್ರು ಪ್ರಯೋಜನ ಮಾತ್ರ ಆಗಿಲ್ಲ.