ಪುನೀತ್ ಮತ್ತು ಶ್ರೀಕಾಂತ್ ರೌಡಿಶೀಟರ್ಗಳಾ? ಅವರ ಅಪರಾಧಿಕ ಹಿನ್ನೆಲೆ ಏನು ಅನ್ನೋದು ತನಿಖೆಯ ನಂತರವೇ ಗೊತ್ತಾಗಬೇಕು, ಈಗಷ್ಟೇ ಪ್ರಕರಣ ದಾಖಲಾಗಿದೆ ಎಂದು ನಿನ್ನೆ ರಾತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೊಲೀಸ್ ಇನ್ಸ್ಪೆಕ್ಟರ್ ಹೇಳುತ್ತಾರೆ. ರಸ್ತೆಗಳಲ್ಲಿ ಸಿಸಿಟಿವಿ ಕೆಮೆರಾಗಳಿರುತ್ತವೆ ತಮ್ಮ ಕೃತ್ಯ ಕೆಮೆರಾದಲ್ಲಿ ಸೆರೆಯಾಗುತ್ತದೆ ಎಂದು ಗೊತ್ತಿದ್ದರೂ ರೌಡಿಗಳು ಕೊಲೆ ನಡೆಸೋದು ಕಾನೂನಿನ (ಪೊಲೀಸರು) ಬಗ್ಗೆ ಭಯ ಇಲ್ಲದಿರೋದು ಸ್ಪಷ್ಟವಾಗುತ್ತದೆ.