Prajadwani Yatre : ಜಮಖಂಡಿಯಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಭರ್ಜರಿ ರೋಡ್​ ಶೋ

ಪ್ರಜಾಧ್ವನಿ ಯಾತ್ರೆ ಸಮಾವೇಶ ಹಿನ್ನೆಲೆ ಜಮಖಂಡಿ ನಗರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಜಮಖಂಡಿ ನಗರದ ಕಡಪಟ್ಟಿ ಬಸವಣ್ಣನ ಗುಡಿ ಬಳಿ ನಡೆಯಲಿರುವ ಸಮಾವೇಶಕ್ಕೆ ಬೆಂಗಳೂರಿಂದ ಹೆಲಿಕಾಪ್ಟರ್ ಮೂಲಕ ಸಿದ್ದು ಆಗಮಿಸಿದ್ದು, ಸಿದ್ದರಾಮಯ್ಯ ಹೆಲಿಕಾಪ್ಟರ್ ಕಂಡು ಕಾಂಗ್ರೆಸ್ ಕಾರ್ಯಕರ್ತರು ಕೇಕೆ ಹಾಕಿದ್ರು. ಇನ್ನು ಸಾಗುವ ಮೆರವಣಿಗೆಯುದ್ಧಕ್ಕೂ ಡಿಫರೆಂಟ್​ ಹಾರಗಳನ್ನು ಹಾಕಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ರು. ಅದ್ರಲ್ಲೂ ಮಾಜಿ ಸಿಎಂಗೆ ಕಬ್ಬಿನ ಹಾರ, ಎಳನೀರು ಹೂವಿನ ಹಾರ ಹಾಕಿ ಖುಷಿ ಪಟ್ರು.