ಸಂಗೀತಾ ಕಾರಣಕ್ಕೆ ವಿನಯ್​-ಕಾರ್ತಿಕ್​ ನಡುವೆ ಮನಸ್ತಾಪ; ಬಿಗ್​ ಬಾಸ್​ನಲ್ಲಿ ಇದು ನಿರ್ಣಾಯಕ ಹಂತ

ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ಅವರು ಕಾರ್ತಿಕ್​ ಮಹೇಶ್​ ಜೊತೆ ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಬಾಂಧವ್ಯ ಬೆಳೆದಿದೆ. ಆದರೆ ವಿನಯ್​ ಗೌಡ ಜೊತೆ ಸಂಗೀತಾ ಕಿರಿಕ್​ ಮಾಡಿಕೊಂಡಿದ್ದಾರೆ. ಈಗ ಈ ಕಿರಿಕ್​ ಬೇರೊಂದು ಹಂತಕ್ಕೆ ಹೋಗಿದೆ. ಸಂಗೀತಾ ಜೊತೆ ಕಾರ್ತಿಕ್​ ಆಪ್ತವಾಗಿ ಇರುವುದರ ಬಗ್ಗೆ ವಿನಯ್​ ಅವರು ತಕರಾರು ತೆಗೆದಿದ್ದಾರೆ. ‘ನಾನಾ ಅಥವಾ ಅವಳಾ’ ಎಂದು ಕಾರ್ತಿಕ್​ಗೆ ವಿನಯ್​ ಅವರು ಆಯ್ಕೆ ನೀಡಿದ್ದಾರೆ. ಅತ್ತ ಸಂಗೀತಾ ಅವರು ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ಕಾರ್ತಿಕ್​ ಕಡೆಯಿಂದ ಬೆಂಬಲ ಸಿಗದಿದ್ದರೂ ಕೂಡ ತಾವು ವಿನಯ್​ ವಿರುದ್ಧ ಒಂಟಿಯಾಗಿ ಹೋರಾಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್​ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಮೂವರ ನಡುವೆ ಸಂಭಾಷಣೆಗಳ ಝಲಕ್​ ಈ ವಿಡಿಯೋದಲ್ಲಿ ಇದೆ. ಜಿಯೋ ಸಿನಿಮಾ ಮೂಲಕ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮವನ್ನು 24 ಗಂಟೆಯೂ ಉಚಿತವಾಗಿ ನೋಡಬಹುದು. ಪ್ರತಿ ದಿನದ ಸಂಚಿಕೆಗಳು ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿವೆ.