ತುಮಕೂರು ತಾಲೂಕಿನ ಕಂಬಾಳಪುರ ಗ್ರಾಮದ ಮುನಿಯಪ್ಪ ಎಂಬುವರ ಮನೆಯ ಬೆಡ್ ಮೇಲೆ ಸುಮಾರು ಐದು ಅಡಿ ಉದ್ದದ ನಾಗರಹಾವು (Cobra) ಪ್ರತ್ಯಕ್ಷವಾಗಿದೆ. ಮಂಚದ ಮೇಲಿದ್ದ ಬೆಡ್ ಶೀಟ್ ಮಡಚಿ ಇಡಲು ಎಂದು ಹೋದಾಗ ಮಂಚದ ಮೇಲೆ ನಾಗರಹಾವು ಮಲಗಿರೋದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಮಂಚದ ಮೇಲೆ ನಾಗರಹಾವು ಕಂಡು ಇಡೀ ಕುಟುಂಬ ಬೆಚ್ಚಿಬಿದ್ದಿದ್ದು ಭಯದಲ್ಲೇ ಉರಗ ತಜ್ಞ ದಿಲೀಪ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ಸಂರಕ್ಷಕ ದಿಲೀಪ್ ಬೆಡ್ಶೀಟ್ ಒಳಗೆ ಬೆಚ್ಚನೆ ಮಲಗಿದ್ದ ನಾಗರಹಾವನ್ನು ಮಲ್ಲಗೆ ಎತ್ತಿ ಸಂರಕ್ಷಣೆ ಮಾಡಿದ್ದಾರೆ. ಸದ್ಯ ಇಡೀ ಕುಟುಂಬ ಅಪಾಯದಿಂದ ಪಾರಾಗಿದೆ.