ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಹ-ಅಧ್ಯಕ್ಷತೆ ವಹಿಸಿದ್ದ ಎಐ ಕ್ರಿಯಾ ಶೃಂಗಸಭೆಯಲ್ಲಿ ತಮ್ಮ ಸಮಾರೋಪ ಭಾಷಣದಲ್ಲಿ ಪ್ರಧಾನಿ ಮೋದಿ, ಇಂದಿನ ಚರ್ಚೆಗಳು ಒಂದು ವಿಷಯವನ್ನು ಹೊರತಂದಿವೆ. ದೃಷ್ಟಿಕೋನದಲ್ಲಿ ಏಕತೆ ಮತ್ತು ಪಾಲುದಾರರಲ್ಲಿ ಉದ್ದೇಶದಲ್ಲಿ ಏಕತೆ ಇದೆ ಎಂದು ಮೋದಿ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಎಐ ಕ್ರಿಯಾ ಶೃಂಗಸಭೆಯು ವಿಶ್ವ ನಾಯಕರು, ನೀತಿ ನಿರೂಪಕರು, ಚಿಂತಕರು, ನಾವೀನ್ಯಕಾರರು ಮತ್ತು ಯುವಕರನ್ನು ಎಐ ಸುತ್ತ ಅರ್ಥಪೂರ್ಣ ಸಂವಾದ ನಡೆಸಲು ಒಟ್ಟುಗೂಡಿಸುವ ಶ್ಲಾಘನೀಯ ಪ್ರಯತ್ನವಾಗಿದೆ ಎಂದು ಮೋದಿ ಹೇಳಿದ್ದಾರೆ.