ಮುಂಬೈ ಸಮೀಪದ ವಾಧವನ್ ಬಂದರು; ಕೋಟಿ ಜನರಿಗೆ ಉದ್ಯೋಗ

ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ 150 ಕಿಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ನಿರ್ಮಾಣವಾಗುತ್ತಿರುವ ವಾಧವನ್ ಬಂದರು ವಿಶ್ವದರ್ಜೆಯದ್ದಾಗಿರಲಿದೆ. ಒಂದು ಕಂಟೇನರ್ ಟರ್ಮಿನಲ್​ಗಳನ್ನು ಹೊಂದಿರಲಿರುವ ಈ ಬೃಹತ್ ಪೋರ್ಟ್​ನಿಂದ 12 ಲಕ್ಷ ನೇರ ಉದ್ಯೋಗಗಳು ಹಾಗೂ ಒಂದು ಕೋಟಿಗೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಪೋರ್ಟ್​ನಿಂದ ಜಿಡಿಪಿಗೆ ಪುಷ್ಟಿ ಸಿಗುವುದರ ಜೊತೆಗೆ ಮಹಾರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಯೂ ಆಗುತ್ತದೆ.