‘ಇದನ್ನು ಅವರು ಧೈರ್ಯ ಇದ್ದರೆ ಮನೆಯಲ್ಲಿ ಮಾಡಲಿ’; ಡಾರ್ಲಿಂಗ್ ಕೃಷ್ಣಗೆ ಸುದೀಪ್ ಸವಾಲ್

ಸುದೀಪ್ ಅವರು ಅನೇಕ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಈ ಸಿನಿಮಾದ ಕಥೆ ಪುರಷರ ಅಹಂಕಾರದ ಸುತ್ತ ನಡೆಯುತ್ತದೆ. ಟ್ರೇಲರ್​ನಲ್ಲಿ ಈ ಬಗ್ಗೆ ಹಿಂಟ್ ಸಿಕ್ಕಿದೆ. ‘ಹೆಣ್ಣುಮಕ್ಕಳು ತಲೆಮೇಲೆ ಕೂರೋಕೆ ಬಂದರೆ ಅವರ ಕಾಲೆಳೆದು ಕುರಿಸಬೇಕು’ ಎನ್ನುವ ಡೈಲಾಗ್ ಸಿನಿಮಾದ ಟ್ರೇಲರ್​ನಲ್ಲಿದೆ. ಈ ವಿಚಾರ ಇಟ್ಟುಕೊಂಡು ಸುದೀಪ್ ಕಾಲೆಳೆದಿದ್ದಾರೆ. ‘ಧೈರ್ಯ ಇದ್ದರೆ ಇದನ್ನು ಅವರು ಮನೆಯಲ್ಲಿ ಮಾಡಲಿ’ ಎಂದು ಕೃಷ್ಣಗೆ ಸುದೀಪ್ ಸವಾಲು ಹಾಕಿದ್ದಾರೆ.