Karnataka By Polls results: ರಾಜ್ಯ ಬಿಜೆಪಿ ನಾಯಕರ ನಡುವೆ ಆಂತರಿಕ ಜಗಳ, ಪರಸ್ಪರ ದ್ಚೇಷದಿಂದ ವೀರಭದ್ರಪ್ಪ ಬೇಸತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯಕ್ಕೆ ಬಂದು ಬಿಜೆಪಿ ನಾಯಕರ ಸಭೆ ನಡೆಸಿ ಬುದ್ಧಿವಾದ ಹೇಳಬೇಕೆಂದು ಅವರು ಹೇಳುತ್ತಾರೆ. ಬಿಜೆಪಿ ಮುಖಂಡರ ಜಗಳಗಳಿಂದಾಗಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂದು ವೀರಭದ್ರಪ್ಪ ಹೇಳುತ್ತಾರೆ.