ಕಂಬಳಕ್ಕಾಗಿ ಭೂಮಿಪೂಜೆ

ಮುಂದಿನ ತಿಂಗಳು 25 ಮತ್ತು 26 ರಂದು ನಗರದ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ ಮಾರಾಯ್ರೇ. ಅದಕ್ಕಾಗಿ ಸಿದ್ಧತೆಗಳು ಆರಂಭಗೊಂಡಿದ್ದು ಅರಮನೆ ಮೈದಾನದಲ್ಲಿಂದು ಭೂಮಿ ಪೂಜೆ ನೆರವೇರಿಸಲಾಯಿತು. ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಂಬಳವನ್ನು ಬೆಂಗಳೂರುನಂಥ ಕಾಸ್ಮೊಪಾಲಿಟನ್ ನಗರಕ್ಕೆ ತರುತ್ತಿರೋದು ಒಂದು ಹೆಮ್ಮೆಯ ಮತ್ತು ಸ್ವಾಗತಾರ್ಹ ಬೆಳವಣಿಗೆ.