Nagashekar Byte 1

ಕೆಲವು ದಿನಗಳ ಹಿಂದಷ್ಟೆ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಘೋಷಣೆ ಮಾಡಿದ ನಿರ್ದೇಶಕ ನಾಗಶೇಖರ್, ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. 'ಭೀಮಾ ಕೋರೆಗಾಂವ್' ಹೆಸರಿನ ಸಿನಿಮಾ ಘೋಷಿಸಿರುವ ನಾಗಶೇಖರ್, ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ನಾಯಕನಾಗಿ ನಟಿಸಲಿದ್ದಾರೆ. ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಕರೆದುಕೊಂಡು ಬರುವ ಆಸೆಯಿದೆ. ಖಂಡಿತ ಕರೆದುಕೊಂಡು ಬರುತ್ತೀನಿ ಎಂದಿದ್ದಾರೆ. ಸಿನಿಮಾಕ್ಕೆ 120 ಕೋಟಿ ಬಜೆಟ್ ಆಗಲಿದ್ದು, ಸಿನಿಮಾದ ನಿರ್ಮಾಣವನ್ನು ಛಲವಾದಿ ಕುಮಾರ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.