ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ವೈರಲ್​​ ಬಗ್ಗೆ ಬಿಇಒ ಸ್ಪಷ್ಟನೆ

ಚಾಮರಾಜನಗರದಲ್ಲಿ ಬುರ್ಖಾ ಧಾರಣೆ ಕುರಿತಾಗಿ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬಿಇಒ ಹನುಮಂತ ಶೆಟ್ಟಿ ಪ್ರತಿಕ್ರಿಯಿಸಿದ್ದು, ತನಿಖೆ ನಡೆಸಿದ್ದು, ವಿಡಿಯೋದ ಕನ್ನಡ ಮತ್ತು ಉರ್ದು ಅನುವಾದಗಳಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು ಈ ಘಟನೆ ಶಾಲೆಯಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ ಎಂದರು.