‘ಕಾಟೇರ 2’ ಸಿನಿಮಾ ಬರುತ್ತಾ? ಒಂದೇ ಮಾತಿನಲ್ಲಿ ದರ್ಶನ್​ ನೇರ ಉತ್ತರ

ತರುಣ್​ ಸುಧೀರ್​ ನಿರ್ದೇಶನದ, ರಾಕ್​ಲೈನ್​ ವೆಂಕಟೇಶ್​ ನಿರ್ಮಾಣದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಇಂದು (ಮೇ 2) ಈ ಚಿತ್ರತಂಡದವರು ದಿಢೀರ್​ ಸುದ್ದಿಗೋಷ್ಠಿ ಕರೆದರು. ಹಾಗಾದರೆ ‘ಕಾಟೇರ 2’ ಸಿನಿಮಾದ ಘೋಷಣೆ ಆಗಬಹುದಾ ಎಂದು ಕೆಲವರು ಊಹಿಸಿದ್ದುಂಟು. ಸಡನ್​ ಸುದ್ದಿಗೋಷ್ಠಿಯಲ್ಲಿ ‘ಕಾಟೇರ’ ಚಿತ್ರದ ಸೀಕ್ವೆಲ್​ ಬಗ್ಗೆ ಏನಾದರೂ ಅನೌನ್ಸ್​ಮೆಂಟ್​ ಆಗಬಹುದಾ ಎಂದು ಊಹಿಸಲಾಯಿತು. ಆದರೆ ಆ ಕುರಿತ ಪ್ರಶ್ನೆಗೆ ದರ್ಶನ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಕಾಟೇರ’ ಸಿನಿಮಾದಿಂದ ದರ್ಶನ್​ ಅವರು ಭಾರಿ ಯಶಸ್ಸು ಪಡೆದುಕೊಂಡರು. ಆದರೆ ಅವರ ‘ಪಾರ್ಟ್​ 2’ ಮಾಡಲು ಅವರು ಸಿದ್ಧರಿಲ್ಲ. ‘ನಾನು ಸೀಕ್ವೆಲ್​ ಮಾಡುವುದಿಲ್ಲ. ಕಾಟೇರ ಅಲ್ಲಿಗೆ ಮುಗಿಯಿತು. ನನಗೆ ಸೀಕ್ವೆಲ್​ ಇಷ್ಟವಿಲ್ಲ. ಗೆದ್ದ ಎತ್ತಿನ ಬಾಲ ಹಿಡಿಯಬಾರದು. ಕಾಟೇರ ಕಥೆಯನ್ನು ಇನ್ನೂ ಎಳೆಯಬಾರದು’ ಎಂದು ದರ್ಶನ್​ ಹೇಳಿದ್ದಾರೆ.