ಶಾಸಕ ಹೆಚ್.ಟಿ.ಮಂಜುಗೆ ಜೈಲಲ್ಲಿ ರೇವಣ್ಣ ಹೇಳಿದ್ದೇನು?

ಜೆಡಿಎಸ್​​ ಶಾಸಕ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ಸಿಗುವುದಕ್ಕೂ ಮುಂಚೆ ಇಂದು  ರೇವಣ್ಣ ಭೇಟಿಗೆ ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ಶಾಸಕ ಹೆಚ್.ಟಿ.ಮಂಜು ಆಗಮಿಸಿದ್ದರು. ನಾಲ್ವರು ಸ್ನೇಹಿತರ ಜತೆ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರಪರಾಧಿಗೆ ಶಿಕ್ಷೆ ಆಗಿದೆ ಎಂದು ಹೆಚ್​.ಡಿ.ರೇವಣ್ಣ ಅವರು ಬಹಳ ಬೇಸರಗೊಂಡಿದ್ದಾರೆ ಎಂದು ಹೇಳಿದ್ದಾರೆ.