ಹೆಚ್ ಡಿ ರೇವಣ್ಣ, ಶಾಸಕ

ಭವಾನಿ ರೇವಣ್ಣ ಅವರು ತಮ್ಮ ಕಾರಿಗೆ ಗುದ್ದಿದ ದ್ವಿಚಕ್ರ ಸವಾರನನ್ನು ಬಯ್ಯುವಾಗ ಬಳಸಿರುವ ಭಾಷೆ ಒಬ್ಬ ಜನ ಪ್ರತಿನಿಧಿ, ಶಾಸಕನ ಪತ್ನಿ, ಸಂಸದ ಮತ್ತು ವಿಧಾನ ಪರಿಷತ್ ಸದಸ್ಯನ ತಾಯಿಗೆ ತಕ್ಕುದಲ್ಲ. ಹಾಸನ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಭವಾನಿ ಜಿಲ್ಲೆಯಾದ್ಯಂತ ಒಳ್ಳೆ ಹೆಸರಿಟ್ಟಿಕೊಂಡಿದ್ದಾರೆ, ಹಾಗಾಗಿ, ಅವರು ಸಾರ್ವಜನಿಕವಾಗಿ ಸಂಯಮ ಕಳೆದುಕೊಳ್ಳಬಾರದಿತ್ತು.