ಮದುವೆ ಮನೆಗೆ ಕುದುರೆ ಏರಿ ವರ ಬರುವುದು ಉತ್ತರ ಭಾರತದಲ್ಲಿ ಸಾಮಾನ್ಯ, ಇನ್ನೂ ಕೆಲವರು ದೊಡ್ಡ ದೊಡ್ಡ ಕಾರಿನಲ್ಲಿ ಬರುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಕರೆದುಕೊಂಡು ಮಾವನ ಮನೆಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದು, ಎಲ್ಲರಿಗೂ ಅಚ್ಚರಿ ತಂದಿತ್ತು. ನವಜೋಡಿಯನ್ನು ವಿಶೇಷವಾಗಿ ಬರಮಾಡಿಕೊಂಡರು. ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಊರಿನ ಮಗಳು ಹೆಲಿಕಾಒ್ಟರ್ನಲ್ಲಿ ಬಂದಿಳಿಯುವುದನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು.